ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್? | Oneindia Kannada

 

ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್? | Oneindia Kannada

 

ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್? | Oneindia Kannada

 

   

  •  

     

     

 

     
  •  
  •  

 

     
    ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್? | Oneindia Kannada
     
     
     
     
     
     
    ಗುರ್ಗಾಂವ್, ನವೆಂಬರ್ 21: ಡೆಂಗ್ಯೂ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದಕ್ಕಾಗಿ ಗುರ್ಗಾಂವ್ ನಲ್ಲಿರುವ ಫೋರ್ಟೀಸ್ ಆಸ್ಪತ್ರೆಯೊಂದು ರೋಗಿಯ ಕಡೆಯಿಂದ 15 ಲಕ್ಷ ರೂ. ಬಿಲ್ಲು ಪಡೆದಿದೆ ಎಂಬ ಆಘಾತಕಾರಿ ವಿಷಯವನ್ನು ರೋಗಿಯ ಕುಟುಂಬದ ಸ್ನೇಹಿತರೊಬ್ಬರು ಹೊರಹಾಕಿದ್ದಾರೆ. ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೆ 'ಡಿ' ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ಆದ್ಯ ಸಿಂಗ್ ಎಂಬ 7 ವರ್ಷದ ಮಗುವನ್ನು ಆಗಸ್ಟ್ 31 ರಂದು ಇಲ್ಲಿನ ಫೋರ್ಟೀಸ್ ಮೆಮೋರಿಯಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ದ್ವಾರಕಾ ಮೂಲದ ಐಟಿ ಉದ್ಯೋಗಿ ಜಯಂತ್ ಸಿಂಗ್ ಅವರ ಪುತ್ರಿ ಆದ್ಯ ಅವರನ್ನು 15 ದಿನಗಳ ಕಾಲ ವೆಂಟಿಲೇಟರ್ ಆಧಾರದ ಮೇಲೆ ಐಸಿಯುನಲ್ಲೇ ಇಟ್ಟುಕೊಳ್ಳಲಾಗಗಿತ್ತು. ಆದರೆ 15 ದಿನವಾದರೂ ಆಕೆಯ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗದೆ, ಆಕೆ ಆಸ್ಪತ್ರೆಯಲ್ಲಿಯೇ ಅಸುನೀಗಿದ್ದಾಳೆ. ಭುಶಃ ಆಕೆ ಮೊದಲೇ ಅಸುನೀಗಿದ್ದರೂ, ಹಣಕ್ಕಾಗಿ ಆಕೆಯ ಸಾವಿನ ಸುದ್ದಿಯನ್ನು ಆಸ್ಪತ್ರೆ ಮುಚ್ಚಿಟ್ಟಿರಬಹುದು ಎಂದು ಬಾಲಕಿಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆಪಾಪ, ಮಗುವಾದರೂ ಬದುಕಿದ್ದರೆ ಅಷ್ಟು ಬಿಲ್ಲು ನೀಡಿದರೂ ತಂದೆ-ತಾಯಿ ಹೇಗೋ ಸಮಾಧಾನ ಪಟ್ಟುಕೊಳ್ಳುತ್ತಿದ್ದರೇನೋ, ಆದರೆ ಮುದ್ದು ಮಗಳೂ ಅಸುನೀಗಿದ್ದಾಳೆ! ವೈದ್ಯರ ನೂರಾರು ಪ್ರಯೋಗಗಳಿಗೆ ಮೈಯೊಡ್ಡಿದ ಆ ಪುಟ್ಟ ದೇಹ, ನಲುಗಿ-ನಲುಗಿ ಉಸಿರು ಮರೆತಿದೆ A Fortis hospital in Gurugram(Gurgaon) allegedly charged a 7 year old girl’s parents more than Rs 18 lakh for 15 days of treatment, and she did not even survive at the end of it! She was suffering from Dengue disease,. watch this video