ಪರೇಶ್ ಮೇಸ್ತಾ ಕೇಸ್ : ಶಿರಸಿಯಲ್ಲಿ ಹಿಂಸಾ ರೂಪಕ್ಕೆ ತಿರುಗಿದ ಪ್ರತಿಭಟನೆ | Oneindia Kannada

ಪರೇಶ್ ಮೇಸ್ತಾ ಕೇಸ್ : ಶಿರಸಿಯಲ್ಲಿ ಹಿಂಸಾ ರೂಪಕ್ಕೆ ತಿರುಗಿದ ಪ್ರತಿಭಟನೆ | Oneindia Kannada

ಪರೇಶ್ ಮೇಸ್ತಾ ಕೇಸ್ : ಶಿರಸಿಯಲ್ಲಿ ಹಿಂಸಾ ರೂಪಕ್ಕೆ ತಿರುಗಿದ ಪ್ರತಿಭಟನೆ | Oneindia Kannada

 •  

 •  
 •  

  ಪರೇಶ್ ಮೇಸ್ತಾ ಕೇಸ್ : ಶಿರಸಿಯಲ್ಲಿ ಹಿಂಸಾ ರೂಪಕ್ಕೆ ತಿರುಗಿದ ಪ್ರತಿಭಟನೆ | Oneindia Kannada
   
  ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣ ಖಂಡಿಸಿ ಇಂದು ಹಿಂದೂ ಸಂಘಟನೆಗಳು ಶಿರಸಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಚ್, ಅಶ್ರುವಾಯು ಪ್ರಯೋಗಿಸಿದರು. ಗಲಭೆಯಲ್ಲಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಜತೆಗೆ 6 ವಾಹನಗಳು ಕಲ್ಲು ತೂರಾಟಕ್ಕೆ ಜಖಂಗೊಂಡಿವೆ.ಪರೇಶ್ ಮೇಸ್ತ ಪ್ರಕರಣವನ್ನು ಖಂಡಿಸಿ ಹಾಗೂ ಪರೇಶ್ ಮೇಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಿಂದೂಪರ ಸಂಘಟನೆಗಳು ಇಂದು ಶಿರಸಿ ಬಂದ್ ಗೆ ಕರೆ ನೀಡಿದ್ದವು. ಇಂದು ಮುಂಜಾನೆಯಿಂದಲೇ ಶಿರಸಿ ಸಂಪೂರ್ಣ ಬಂದ್ ಆಗಿದ್ದರೂ ಅಲ್ಲಲ್ಲಿ ಅಂಗಡಿಗಳು ತೆರೆದಿರುವುದನ್ನು ಪ್ರತಿಭಟನಾಕಾರರು ಮುಚ್ಚಿಸಿದರು.ಶಿರಸಿಯ ವಿಕಾಸ ಆಶ್ರಮ ಮೈದಾನದ ಮುಂದೆ ಸೇರಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಸಕ ವಿಶ್ವೇಶರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆಗಿಳಿದರು. ಈ ವೇಳೆ ಪ್ರತಿಭಟನಾ ಜಾಥಾ ನಡೆಸಲು ಮುಂದಾದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ತಡೆದರು. Sirsi bundh, called by the Hindu organizations, has turned to violence. The bundh was called on to condemn Paresh Mesta's death. Two people injured and more than 6 vehicles damaged in the violent protest.