2018ರ ಮೇಷ ರಾಶಿ ವರ್ಷ ಭವಿಷ್ಯ | Oneindia Kannada

 

2018ರ ಮೇಷ ರಾಶಿ ವರ್ಷ ಭವಿಷ್ಯ | Oneindia Kannada

 

2018ರ ಮೇಷ ರಾಶಿ ವರ್ಷ ಭವಿಷ್ಯ | Oneindia Kannada

 

   

 •  

   

   

 

     
 •  
 •  

 

   
  2018ರ ಮೇಷ ರಾಶಿ ವರ್ಷ ಭವಿಷ್ಯ | Oneindia Kannada
   
   
   
   
   
   
  Aries zodiac sign yearly horoscope for 2018 is here. How the career, love, marriage, court dispute, business, education would affect on Aries zodiac sign? Astrologer explains according to the Vedic astrology (Moon sign). ಗಡಪಾರೆಯಿಂದ ತಿವಿಸಿಕೊಂಡವರಿಗೆ ಸೂಜಿಯಲ್ಲಿ ಚುಚ್ಚಿದರೆ ಯಾವ ಲೆಕ್ಕ ಹೇಳಿ? ಮೇಷ ರಾಶಿಯವರ ಸ್ಥಿತಿ ಹಾಗೆ. ಶನೈಶ್ಚರ ಈಗಿನ್ನೂ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಹೋಗಿದ್ದಾನೆ. ಅಂದರೆ ಎರಡೂವರೆ- ಮೂರು ವರ್ಷಗಳ ಕಾಲ ಅನುಭವಿಸಿದ ಅನಾರೋಗ್ಯ, ಅವಮಾನ, ಸಾಲ ಬಾಧೆ ಎಲ್ಲವೂ ಕಡಿಮೆ ಆಗುತ್ತಿರುವ ಅನುಭವ ಆಗುತ್ತದೆ. ಪೆಟ್ಟು ಕೊಟ್ಟು ಬೆನ್ನು ನೆಟ್ಟಗೆ ಮಾಡಿರುವ ಶನಿಯು ಕಲಿಸಿದ ಪಾಠ ಮರೆಯಬೇಡಿ.ಈ ವರ್ಷದ ಅಕ್ಟೋಬರ್ ವರೆಗೆ ಏಳರಲ್ಲಿ ಸಂಚರಿಸುವ ಗುರು ಒಳ್ಳೆಯದನ್ನೇ ಮಾಡಲಿದ್ದಾನೆ. ಸಾಂಸಾರಿಕವಾಗಿ ಇದ್ದ ಭಿನ್ನಾಭಿಪ್ರಾಯಗಳು ನಿವಾರಣೆ ಆಗುತ್ತವೆ. ಸಂಗಾತಿ ಮಧ್ಯೆ ಇದ್ದ ಸಣ್ಣ ಪುಟ್ಟ ಅಸಮಾಧಾನ ಕರಗಿ, ಅನ್ಯೋನ್ಯತೆ ಸಾಧ್ಯವಿದೆ. ಶನಿಯ ದುಷ್ಪ್ರಭಾವದಿಂದ ಆಚೆ ಬಂದು ಚೇತರಿಸಿಕೊಳ್ಳುತ್ತಿರುವ ನಿಮಗೆ ವರ್ಷವಿಡೀ ನಿರಾಳ ಇರುತ್ತದೆ.ಆದರೆ, ಆರೋಗ್ಯ ಸುಧಾರಿಸಿತು ಎಂಬ ಕಾರಣಕ್ಕೆ ಮದ್ಯ ಮತ್ತಿತರ ಚಟಕ್ಕೆ ಆಕರ್ಷಿತರಾಗಬೇಡಿ. ಮಧುಮೇಹ- ರಕ್ತದೊತ್ತಡ ನಿಯಂತ್ರಣಕ್ಕೆ ಬಂತು ಎಂದು ಮನಸೋ ಇಚ್ಛೆ ಜೀವನ ಶೈಲಿ ಬದಲಾಯಿಸಿಕೊಂಡರೆ ಮಾತ್ರ ಕಷ್ಟ ಕಷ್ಟ. ಈ ವರ್ಷದ ಅಕ್ಟೋಬರ್ ನಂತರ ಆರೋಗ್ಯದ ಬಗ್ಗೆ ಸ್ವಲ್ಪ ಹುಷಾರಾಗಿರಿ.